ಮಂಜೇಶ್ವರ: ಮಹಿಳೆಯ ಮೃತದೇಹ ಮನೆಯೊಳಗೆ ಬೆಂಕಿ ತಗುಲಿ ಉರಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮಂಜೇಶ್ವರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಕಾಶಿಮಠ ಗುಡ್ಡೆಯ ದಿವಂಗತ ಯೋಗೇಶ್ ಪ್ರಭು ಅವರ ಪತ್ನಿ ಸಾವಿತ್ರಿ ಪ್ರಭು (65) ಮೃತಪಟ್ಟವರು.
ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಸಾವಿತ್ರಿ, ಮಗ ಗುರುಪ್ರಸಾದ್ ಪ್ರಭು ಮಲಗಿದ್ದರು. ಇಂದು ಬೆಳಿಗ್ಗೆ ಎದ್ದು ನೋಡಿದಾಗ ಅಡುಗೆ ಮನೆಯಲ್ಲಿ ಸಾವಿತ್ರಿ ಅವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡುಗೆ ಮನೆಯ ಫೈಬರ್ ಕುರ್ಚಿಯ ಮೇಲೆ ಕುಳಿತು ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಕುರ್ಚಿ ಕರಗಿ ಮೈಗೆ ಅಂಟಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಬಿದ್ದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಮಕ್ಕಳಾದ ಗುರುಪ್ರಸಾದ್ ಪ್ರಭು
ಸಂಗೀತಾ ಪೈ ಸೊಸೆ: ಪುಷ್ಪಾವತಿ, ಅಳಿಯ ಗುರುಪ್ರಸಾದ್ ಪೈ. ಸಹೋದರರ ಸಹೋದರಿಯರಾದ ಪ್ರಭಾ ನಾಯಕ್, ರೇವತಿ ಪೈ, ಉದಯ ಕುಮಾರಿ, ಜಯಶ್ರೀ ಕಿಣಿ, ಕೇಸರಿ ಪ್ರಭು ಎಂಬಿವರನ್ನು ಅಗಲಿದ್ದಾರೆ
Tags
ಮಂಜೇಶ್ವರ
